ಮಾತು ಬೆಳ್ಳಿ ಮಾನ ಬಂಗಾರ ಅಂತಾರೆ... ಆದ್ರೆ ಆ ಮೌನಾನೆ ನಂಗೆ ಮುಳುವಾಯಿತು.
ವಿಷಯಗಳನ್ನ ಹೇಳಿಬಿಡಬೇಕು, ಅದರಲ್ಲೂ ಇಂಥಹ ವಿಷಯಗಳು, ಹೇಳದೆ ಇರಲೇ ಬಾರದು.
ನಂಗೊತ್ತಿತ್ತು,
ಮಾತಾಡಬೇಕು ಇವತ್ತು ಅಂತ ನಂಗೆ ಚೆನ್ನಾಗಿ ಗೊತ್ತಿತ್ತು.
ಇವತ್ತಲ್ಲದಿದ್ರೆ ಇನ್ಯಾವತ್ತು ಇದನ್ನೆಲ್ಲಾ ಹೇಳಕ್ಕಾಗಲ್ಲ ಅಂತಾನು ಗೊತ್ತಿತ್ತು.
ಬಾಯಿ ಬಿಟ್ಟೆ, ಆದ್ರೆ ಮಾತೇ ಹೊರಡುತ್ತ ಇಲ್ಲ. ಧ್ವನಿ ಹೊರಡದಂತೆ ಯಾರೋ ಗಂಟಲನ್ನು ಒತ್ತಿದ ಹಾಗೆ ಭಾಸವಾಗ್ತಿತ್ತು.
ನನ್ನ ನಾಲಿಗೆ ಹೆಣವಾಗಿ ಬಿದ್ದಿತ್ತು....
ಇನ್ನು ನೆನಪಿದೆ ನಂಗೆ,
ಆ ನಿನ್ನ ಮುಗ್ಧ ಮುಖದಲ್ಲಿ ಮೂಡಿದ್ದ ಮುಗುಳ್ನಗೆ, ಏರಿದ ಹುಬ್ಬುಗಳು, ಅರಳಿದ ಕಂಗಳು, ನಿಮಿರಿದ ಕಿವಿಗಳು...
ನಾ ಏನೋ ಹೇಳ್ತಿನಿ ಅಂತ ನೀ ಕಾದ ನಿಮಿಷಗಳು,
ಆ ನಿಮಿಷಗಳು ನಿನ್ನ ಮುಖದಲ್ಲಿ ಮೂಡಿಸಿದ ಭಾವನೆಗಳು, ಎಲ್ಲ ನೆನಪಿದೆ ನಂಗೆ...
ಇನ್ನು ಹಾಗೆ, ಆ ಮುಖ ಇಲ್ಲೇ ಎದುರಿಗೆ ಇದೆಯೇನೋ ಅನ್ನೋ ಅಷ್ಟು ಹೊಸತಾಗಿದೆ ಆ ನೆನಪುಗಳು, ಆ ನಿಮಿಷಗಳು.....
ಕಡೆಗೂ ಮಾತು ಹೊರಡ್ತು, 'ಇಲ್ಲ' ...
'ನೀ ಏನು ಹೇಳಲ್ವಾ' ಅಂತ ಕೇಳಿದ ಪ್ರಶ್ನೆಗೆ, ಹೊರಟಿದ್ದು ಒಂದೇ ಪದ, 'ಇಲ್ಲ'..
ನೀನಿಲ್ಲದೆ ನಂಗೆ ಬದಕಕ್ಕೆ ಆಗಲ್ವೆ ಅಂತ ಹೇಳಬೇಕಿತ್ತು ನಾನು,
ನನ್ನ ಬಿಟ್ಟು ಎಲ್ಲೂ ಹೋಗಬೇಡಾ ಅನ್ನಬೇಕಿತ್ತು ನಾನು,
ನಿನ್ ಬಿಟ್ರೆ ಯಾರಿದ್ದಾರೆ ನಂಗೆ, ನಿನ್ ಧ್ವನಿ ಕೇಳದೆ ಹೇಗಿರಲಿ ನಾನು, ನಿನ್ನ ನೋಡದೆ...................
ಇವತ್ತಿಗೂ ಉತ್ತರ ಸಿಕ್ಕಿಲ್ಲ, ಮನದಲ್ಲಿ ಮೂಡಿದ ಅಷ್ಟು ಮಾತುಗಳು 'ಇಲ್ಲ' ಅನ್ನೋ ರೂಪ ಹೇಗೆ ತಾಳಿತು ಅಂತ...
ನೀ ಹೋಗೋದನ್ನೇ ನೋಡ್ತಾ ನಿಂತಿದ್ದೆ... ಅಸಹಾಯಕನಾಗಿ.... ಕಲ್ಲಿನಂತೆ... ಹುಚ್ಚನಂತೆ...
ಓಡಿ ಹೋಗಿ, ನಿನ್ನ ಅಪ್ಪಿ ಹಿಡಿದು, ಮನಸಲ್ಲಿದ್ದಿದ್ದೆಲ್ಲ ಹೇಳಣ ಅಂತ ಅನ್ಸ್ಥಿತ್ತು.....
ಜೀವನಾನೆ ಒಟ್ಟಿಗೆ ಕಳ್ಯೋ ಆಸೆ ಇತ್ತು, ನಿನ್ನ ಹಣೆಗೆ ಕುಂಕುಮ ಇಡೋ..............
ಏನೇನೋ ಕನಸು..... ಒಂದೂ ಹೇಳಕ್ಕಾಗ್ಲಿಲ್ಲ.....
ಇನ್ನೊಂದು ಸಲ ನಿನ್ ಮುಖ ನೋಡಬೇಕಿತ್ತು, ಇನ್ನೊಂದು ಸಲ ನಿನ್ ಧ್ವನಿ ಕೇಳಬೇಕಿತ್ತು...
ತಿರುಗೇ ಅಂತ ಮನಸ್ಸು ಕೂಗ್ತಾ ಇತ್ತು, ದೇಹ ಕಲ್ಲಾಗಿತ್ತು........
ಗೊತ್ತಾಯ್ತು ನಂಗೆ, ಕಳೆದುಕೊಂಡೆ ನಿನ್ನ ಅಂತ...
ಯಾರಿಂದ ಪ್ರಪಂಚದ ಪ್ರತಿ ವಸ್ತುನು ಸುಂದರವಾಗಿ ಕಾಣಕ್ಕೆ ಶುರು ಆಯ್ತೋ,
ಯಾರ ನೆನಪೇ ನನ್ನ ಉಸಿರಾಯ್ತೋ...
ಈಗೆಲ್ಲ ಬರಿ ದುಃಖ, ಬರಿ ಏಕಾಂತ..
ಪ್ರಪಂಚ ನಂಗೆ ಪಾಳುಗುಡಿ ಥರ,
ಅದರಲ್ಲಿದ್ದ ಸೌಂದರ್ಯ ನೀನು, ಚೇತನ ನೀನು....
ಗೊತ್ತಾಯ್ತು ನಂಗೆ, ನಿನ್ನ ಕಳಕೊಂಡೆ ಅಂತ...
ಆ ಕ್ಷಣ ಇನ್ನಿಲ್ಲ, ಆ ಧ್ವನಿ ಇಲ್ಲಿಲ್ಲ, ಆ ನಗೆಯ ಸುಳಿವೇ ಇಲ್ಲ..
ಕ್ಷಣಗಳು ದಿನಗಳಾದವು, ದಿನಗಳು ವರ್ಷಗಳಾದವು....
ಕಾಲ ಹೇಗೆ ಕಳೆಯಿತು ಅಂತ ಗೊತ್ತೇ ಆಗಿಲ್ಲ ನಂಗೆ..
ಎಸ್ಟೋ ದಿನ ಕನಸಿಂದ ಏಳ್ತೀನಿ,
ನಿನ್ನ ಮುಗುಳ್ನಗೆ ಕಣ್ಣಲ್ಲಿ ತುಂಬಿರತ್ತೆ
ನಿನ್ನ ಧ್ವನಿ ಕಿವಿಯಲ್ಲಿ ಮೂಡಿರತ್ತೆ
ನೀ ನೆಡೆದು ಹೋದ ದಾರಿ,
ನಡೆದಾಗ ತುಳಿದ ಎಳೆಗಳ ಸಪ್ಪಳ,
ನೀ ನನ್ನಿಂದ ದೂರ ಸರಿದಾಗ, ಬೀಸಿದ ಗಾಳಿ...
ಇನ್ನು ಹಾಗೆ ಕಣ್ಣೆದುರಿಗೆ ಇದೆ....
ಇನ್ನೊಂದು ಸಲ ನಿನ್ ಮುಖ ನೋಡಬೇಕಿತ್ತು, ಇನ್ನೊಂದು ಸಲ ನಿನ್ ಧ್ವನಿ ಕೇಳಬೇಕಿತ್ತು..
ಇನ್ನು ಕಾಯ್ತಾ ಇದ್ದೀನಿ,
ಆ ಕೂಗಿಗೆ, ಆ ಧ್ವನಿಗೆ, ಆ ಮುಗುಳ್ನಗೆಗೆ..
ಭಿರಿದ ಹೃದಯದಿಂದ, ತೆರೆದ ಹೃದಯದಿಂದ..
ಒಮ್ಮೆ ನನ್ನ ಹೆಸರ ಕರಿತೀಯ, ಒಮ್ಮೆ ತಿರುಗಿ ನೋಡ್ತ್ಹಿಯ...
ಹುಚ್ಚು ಪ್ರೀತಿಯ ಹತ್ತಾರು ಮುಖಗಳು ಅಂತಿರ....!!!!
ಅಥವಾ,
ಮಾತು ಬೆಳ್ಳಿ ಮೌನ ಬಂಗಾರ ಅಂತೀರ...........!!!!